Friday, July 15, 2011


ಓ ಇನಿಯ ಅದು ನೀನೇನಾ?

ಮುಂಜಾನೆ ಮಂಜನು ಸರಿಸಿದ ಉಷೆಯು
ಎಲೆಯೊಂದರ ಮೇಲಿನ ಪುಟ್ಟ ಹನಿಯ ಮಿಂಚಿಸಿದಂತೆ,
ದೀಪವು ತನ್ನ ಕಿರಣದಿಂದ ಪ್ರತಿ ಕೋಣೆಯ ಆವರಿಸಿದಂತೆ,
ನಿನ್ನ ಆಳವಾದ ನೋಟದಿಂದ ನನ್ನ ಹೃದಯವ ಸ್ಪರ್ಶಿಸಿದ
ಆ ಮಿಂಚಿನ ಮಾಯಗಾರ ನೀನೇನಾ?

ಈ ಬದುಕಿನ ತೆರೆಯಲ್ಲಿ, ಇಲ್ಲದಿರೋ ಪ್ರೀತಿಯ ಸಂಚಿಕೆಗೆ
ನನಗೆ ತಿಳಿಯದೆ ಹೊಸ ಪುಟವ ಸೇರಿಸಿದೆ
ಎಂದೂ ಕಾಣದ ಪ್ರೀತಿಯ ಸಿಹಿಯಾತನಗೆ ಇಂದು ಸಿಲುಕಿಸಿದೆ
ಈವರೆಗೂ ನಾಕಂಡ ಪ್ರತಿ ಕನಸಲ್ಲೂ ಬಿಡದೆ ಮೂಡಿದ್ದ
ಆ ಮುದ್ದಾದ ನಾಯಕ ನೀನೇನಾ?

ಪ್ರೇಮ ಮಹಾಕಾವ್ಯದ ಒಂದೊಂದು ಹಸಿಮುತ್ತು ಪೋಣಿಸಿ
ನನಗಾಗಿಯೆ ನೀ ಬರೆದೆ ಒಲವ ಕವನ
ನನ್ನ ಗೆಜ್ಜೆಯ ಸದ್ದನು ಹೋಲುವ ಹೊಸ ರಾಗವ ಪರಿಚಯಿಸಿ
ಎಂದು ನುಡಿಯದಿರೋ ಶ್ರುತಿಯ ಮನದಲಿ ಮೀಟಿದ
ಆ ಹೃದಯವೀಣೆಯ ಪ್ರತಿದ್ವನಿಯು ನೀನೇನಾ?

ನಿಲುಕದಿರೊ ಗಗನದ ಬಣ್ಣದಿ ನೀ ಬಿಡಿಸಿದ ಚಿತ್ತಾರವ
ಲೋಕವೆ ಕಂಡು ಮೆಚ್ಚಿದೆ, ನನ್ನ ಅಂಗೈಯ ಮದರಂಗಿಯಲ್ಲಿ
ಅಂತರಾಳದೊಳಗೆ ಅಡಗಿರುವ ದುಗುಡವ ಪ್ರೀತಿಕುಂಚದಿ ತೀಡಿ
ಖಾಲಿ ಮನಸಿನಲಿ ಬಣ್ಣಬಣ್ಣದ ರಂಗವಲ್ಲಿ ಬಿಡಿಸಿದ
ಆ ಪ್ರೇಮದ ಚಿತ್ರಕಾರ ನೀನೇನಾ?

ಮಳೆಯ ಒಂದು ಹನಿಗಾಗಿ ನವಿಲು ಪ್ರತಿ ಕ್ಷಣ ಕಾದಂತೆ
ನಿನ್ನ ಕಂಡ ವೇಳೆ ಆನು, ರೆಕ್ಕೆ ಬಿಚ್ಚಿ ಕುಣಿಯುವೆ
ಸಿಗದೆ ಹೋದರೆ ನೀನೆನಗೆ, ಈ ಹೃದಯ ಚೂರಾದಿತು!..........

Tuesday, July 5, 2011ಕವಿತೆಗೆ ಸ್ಫೂರ್ತಿ.........


ನನ್ನ ಕವಿತೆಗೆ ಸ್ಫೂರ್ತಿ ಏನಾದರು ಆಗಬಹುದು
ಗೆಳತಿ, ನೀ ಎನ್ನ ಸ್ಪೂರ್ತಿಯಾಗಬಹುದು
ನಿನ್ನ ಮೋಹಕ ನಡೆ ಸ್ಪೂರ್ತಿಯಾಗಬಹುದು
ನಿನ್ನ ಭಾವುಕ ನುಡಿ ಸ್ಪೂರ್ತಿಯಾಗಬಹುದು

ನಿನ್ನ ಜೊತೆ ಕಳೆಯುವ ಪ್ರತಿ ಕ್ಷಣ ಕವಿತೆಯಾಗಬಹುದು
ನಿನ್ನ ಹೊಳೆಯುವ ಕಂಗಳೆ ಸ್ಪೂರ್ತಿಯಾಗಬಹುದು
ಕಣ್ಣೋಟಗಳು ಬೆರೆತಾಗ ಮೌನ ಕಾವ್ಯಸುಧೆಯಾಗಿ ಹರಿಯಬಹುದು

ನಿನ್ನ ಸ್ಪರ್ಶದ ರೋಮಾಂಚನ ಪಲ್ಲವಿಯಾಗಬಹುದು
ನಿನ್ನ ಕನಸುಗಳು ನವೀನ ಚರಣಗಳಾಗಬಹುದು
ನೀ ನನ್ನ ಕರೆಯುವ ಹೆಸರು ಕವಿತೆಯ ಶೀರ್ಷಿಕೆಯಾಗಬಹುದು
ನೀ ನನ್ನೊಡನೆ ಇರುವಾಗ ಮುಂದಿನ ಜನ್ಮದಲ್ಲೂ ನಾ ಕವಿಯಾಗಬಹುದು

Thursday, April 28, 2011


ಜೊತೆಯಾಗಿ ನಡೆ…........


ಬೇಸರದ ಜೀವನ ನಾ ಒಲ್ಲೆ, ನಿನಗಾಗಿ ಕಾದಿರುವೆ ನಾ ಇಲ್ಲೇ,

ಬದುಕು ಸಾಗಿಸಲು ನಾ ಬಲ್ಲೆ,

ಆದರೆ ಜೊತೆಯಾಗಿ ಇರಬೇಕು ನೀ ನನ್ನ ನಲ್ಲೇ. ಬದುಕಲು

ಕಳಿಸಲಿಲ್ಲ ನೀನು, ಆದರೆ ಬದುಕಿಗೆ ಬೆಳಕಾದೆ ನೀನು.

ಹೇಳದೇ ಕೇಳದೇ ಬಂದೆ ನೀನು, ಹೇಳದೇ ಹೋಗಬೇಡ ಎಂದಿಗೂ

ನೀನು, ನೀನಿಲ್ಲದೇ ಇರಲಾರೆನು ನಾನು,

ಬದುಕ ಮರೆಸಿರುವೆ ನೀನು. ಜೊತೆಯಾಗಿ ನಡೆ ನನ್ನೊದಿಗೆ ನೀನು, ನೀ ಬಿಟ್ಟರೆ ದಾರಿಯ ಮರೆಯುವೆ ನಾನು.

Saturday, April 16, 2011ದೂರ ದೂರ ಹೋದರು ನೀನು,
ದೂರವಾಗುವುದೇ ನಿನ್ನ ನೆನಪು,
ಇನ್ನು ಉಸಿರಾಟವು ಕಷ್ಟವೇನೆ,
ಮುಂದೇನು ಊಹಿಸಲು ಕಷ್ಟವೇನೆ,
ನಾ ಹೀಗಿದ್ದರೆ ಇಷ್ಟವೇನೆ.. ??

ಇಲ್ಲ ಇಲ್ಲ ಯಾರು ಇಲ್ಲ,
ನೀನೆ ಇಲ್ಲವಾದ ಮೇಲೆ,
ಇನ್ಯಾರ ಕದ್ದು ನೋಡಲಿ ನಾ.. ??

ಸಮಯ ಬೇಗ ಕಳಿಯುತ್ತಿಲ್ಲ,
ಸೋನೆ ಮಳೆಯು ಸುರಿವ ವೇಳೆ,
ಇನ್ಯಾರ ಜೊತೆ ನೆನೆಯಲಿ ನಾ.. ??

ಮಾತು ಮೌನ ಒಂದಾದರೆ,
ಕಣ್ಣೀರಿಗೂ ಬೆಲೆ ಇಲ್ಲವಾದರೆ,
ಎದೆ ನೋವ ಹೇಗೆ ತೋರಿಸಲಿ ನಾ.. ??

ಆಗೋದೆಲ್ಲ ಏನೆ ಆದರು,
ಪ್ರೀತಿಗೆಂದು ಸಾವಿಲ್ಲವೆನ್ನುವರು
ಇನ್ನು ಯಾವ ನೀತಿ ಕೇಳಿಸಲೇ ................

ನನ್ನ ನೀ
ಒಂದು ಕ್ಷಣವೂ
ಪ್ರೀತಿಸದಿದ್ದರು ಚಿಂತೆಯಿಲ್ಲ
ಕಡೆಯ ಪಕ್ಷ
ನಿನ್ನ ಕಿರು ನಗೆಯ ವರವ
ಕೊಡುವುದಾದರೆ ಚಿತೆಯಿಂದ
ಎದ್ದು ಬಂದು ಸ್ವೀಕರಿಸುವೆ
ಮರು ಜನ್ಮಕೆ ಕರುಣಿಸುವುದಾದರೆ
ಈ ಕ್ಷಣವೇ ಮಡಿದು
ನನ್ನೊಲವಿನ ಗೋರಿಯಾಗುವೆ :) FEEL MY LOVE ....................ಅವಳಿಗಾಗಿ ನಾನು ಹಾಕಿದೆ ಬಣ್ಣ ಬಣ್ಣದ ಬಟ್ಟೆ ...
ಜೀಂ ಗೆ ಹೋಗಿ ಬೆಳೆಸಿದೆ ,ಕಲ್ಲಿನಂತಹ ಕೈ ರಟ್ಟೆ ..
ಆದ್ರೆ ಅವಳು ಹೂವಿಂದ ಹೂವಿಗೆ ಹಾರುವ ಚಿಟ್ಟೆ ..
ಕೊನೆಗೆ ಕೈ ಗೆ ಕೊಟ್ಟಳು ಕಬ್ಬಿಣದ ತಟ್ಟೆ ....

ನಿಶ್ಯಬ್ದದ ಅಮೃತ ಮಹಲಿನ ಮೇಲೆ,
ಕತ್ತಲೆ ಹಾಳೆಗಳಲ್ಲಿ ನಮ್ಮನ್ನು ನಾವೇ ಸುತ್ತಿಕೊಳ್ಳೋಣ
ನಮ್ಮೆರಡು ದೇಹದ ಮೇಣದ ಬತ್ತಿ ಹಚ್ಚಿಕೊಳ್ಳೋಣ
ಮುಂಜಾಬ ಇಬ್ಬನಿ ತುದಿಗಾಲಲ್ಲಿ ನಿಂತಾಗ
ನಮ್ಮ ಉಸಿರಿನ ಪಿಸುಮಾತು ಬೇರಾಗದಿರಲಿ

ಕಾವಳದ ನುಣುಪು ಸುಗಂಧದಲ್ಲಿ
ನಾವಿಬ್ಬರೂ ಗಂಧವಾಗೋಣ
ವಸುಧೆಯ ಸುವಾಸನೆಯಲ್ಲಿ ಅದ್ದಿದ್ದೀ ದೇಹಗಳು
ಚೇತನಗಳಾಗಲಿ, ಮಿಡಿಯುತ್ತಿರಲಿ..

Thursday, March 31, 2011ಜಿಪುಣ ನನ್ನ ಗಂಡ

ಮೈಸೂರು ದಸರೆಗೆ ಹೋಗೋಣ ಬಾರೇ
ಚಾಮುಂಡಿ ದೇವಿಯ ಅಂಬಾರಿ ನೋಡೋಣ ಬಾರೇ
ಜಗಮಗಿಸುತಿದೆ ಮೈಸೂರು ಬೆಳಕಲ್ಲಿ
ಕೈ ಬೀಸಿ ಕರೆಯುತಿದೆ ರಂಗವಲ್ಲಿ
ಜಟಕಾ ಕುದುರೆ ಹತ್ತಿ ಮೈಸೂರು ಸುತ್ತೋಣ
ಕೃಷ್ಣ ರಾಜ ಸಾಗರದಲ್ಲಿ ಮೈ ಮರೆಯೋಣ
ಜೇಬ್ರ ಕೋಬ್ರಾ ಹುಲಿ ಸಿಂಹ zooನಲ್ಲಿ
ಸೂಟು ಬೂಟು ರಾಜಾಸೀಟು ಅರಮನೆಯಲ್ಲಿ
ಇನ್ನೇನು ನೋಡಬೇಕು ಕೇಳು ಜಾಣೆ
ಗ್ಯಾರೆಂಟಿ ಕರಕೊಂಡು ಹೋಗ್ತೀನಿ ನಿನ್ನಾಣೆ
ಬರೀ ಸುಳ್ಳು ಬರೀ ಸುಳ್ಳು ನಾನು ನಂಬೋದಿಲ್ಲ
ನಾನು ಕರಕೊಂಡು ಹೋಗೋಕೆ ಹೇಳಿದ್ದು ಲಲಿತ್ ಮಹಲ್ ಗೆ
ಆದ್ರೆ ನೀವು ಕರಕೊಂಡು ಹೋಗಿದ್ದು ಒಂಟಿಕೊಪ್ಪಲ್ ಗೆ
ನಾನು ನಂಬೋದಿಲ್ಲ ನಿಮ್ಮನ್ನ ನಾನು ನಂಬೋದಿಲ್ಲ .