Friday, January 28, 2011


 ಈ  ತರಹದ ವೇದನೆಯ ಉನಿಸಬೇಡ ನನ್ನವಳೇ ,
ನನ್ನ ಉಸಿರು ಭಾರವಾದಿತು ಎಚ್ಹರ................

ನನ್ನ ನೋವಿನ ಕೊಳವು ಎಂದು ತುಂಬಿರುವುದು ,
ಕಲ್ಲು ಹೊಡೆದರೆ ನೋವು ಹೊರ ತುಳುಕಿತು  ಎಚ್ಹರ ..

ಕರಿ ಕಾರ್ಮೋಡ ಗಳೇ ಚಿಂತೆಗಳಾಗಿ ಹರಡಿವುದು ...
ಮಳೆಯೆಂಬ ಅಳು ಬಾರದೆ ಹಗುರವಾಗೀನು  ಎಚ್ಹರ ..

ನನ್ನ ಈ ದೇಹವೇ  ನಿನ್ನ ಪಾದರಕ್ಷೆ  ಯಾಗಿರುವುದು ..
ಮುಳ್ಳಿನ ಮೇಲೆ ನಡೆಸದಿರು , ಸವೆದಿತು ಎಚ್ಹರ ..

ಓ ಪ್ರಿಯೆ ಇದು ನ್ಯಾಯನ ..............
Thursday, January 27, 2011
ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?...............

ಈ ಸಾಫ್ಟವೇರ್ ಇಂಜಿನಿಯರ್ ಜೀವನ ಹೇಗೆ ಅಂದ್ರೆ ಸ್ವಲ್ಪ ದಿನ ಸ್ವರ್ಗಾನೆ ತಮ್ಮ ಕೈಲಿ ಇದೆ ಅನ್ನೋವಷ್ಟು ಖುಷಿಯಾಗಿ ಇರ್ತಾರೆ.ಇನ್ನು ಸ್ವಲ್ಪ ದಿನ ಭೂಮಿ ಭಾರ ಎಲ್ಲ ಇವರ ತಲೆ ಮೇಲೆ ಇದೆಯೇನೋ ಅನ್ನೋ ಹಾಗೆ ಇರ್ತಾರೆ. ಒಂದ್ ರೀತಿನಲ್ಲಿ ಹೇಳ್ಬೇಕು ಅಂದ್ರೆ ಇವರುಗಳ ಜೀವನ monsoon change ಆದಾಗೆ ಚೇಂಜ್ ಆಗ್ತಾನೆ ಇರುತ್ತೆ. ಅಂಥ ಸಾಫ್ಟವೇರ್ ಇಂಜಿನಿಯರ್ ಗಳಲ್ಲಿ ನಾನು ಒಬ್ಬ ಕಣ್ರೀ. ಇಷ್ಟೆಲ್ಲಾ ಟಿಪ್ಪಣಿನ ಇವನು ಏನಕ್ಕೆ ಬರೀತಾ ಇದಾನೆ ಅಂಥ ನಿಮಗೆ ಅನ್ನಿಸ್ತ ಇರಬಹುದು. ಈಗ ವಿಷಯಕ್ಕೆ ಬರ್ತೀನಿ.
ನನಗೆ ಒಬ್ಬಳು ಆತ್ಮೀಯ ಗೆಳತಿ ಇದ್ದಳು. ಪ್ರತಿ ದಿನ ಇಬ್ಬರು ಫೋನ್ ನಲ್ಲಿ ಕಷ್ಟ ಸುಖ ಮಾತಡ್ಕೊಳ್ತಾ ಇದ್ವಿ. ಪ್ರತಿ ದಿನ ನಾನೇ ಅವಳಿಗೆ ಫೋನ್ ಮಾಡ್ತಾ ಇದ್ದೆ. ನಾನು ಮಾಡ್ಲಿಲ್ಲ ಅಂದ್ರೆ ಕಾಯೋ ಅಷ್ಟು ತಾಳ್ಮೆ ಕೂಡ ಅವಳಲ್ಲಿತ್ತು. ಒಂದ್ ಸಲ ನನಗೆ ಆಫೀಸ್ನಲ್ಲಿ ತುಂಬ ಕೆಲಸ ಇತ್ತು. ಒಂದು ನಾಲ್ಕೈದು ದಿವಸ ನನ್ನನ್ನ ನಾನೇ ಮರೆಯೋ ಅಷ್ಟು ವಿಪರೀತ ಕೆಲಸ ಇತ್ತು. ಊಟ , ತಿಂಡಿ, ನಿದ್ದೆಯ ಕಡೆಗೆ ಗಮನವಿರದಷ್ಟು ಕೆಲಸದಲ್ಲಿ ಏಕಾಗ್ರತೆ!!!. ಈ ಸಮಯದಲ್ಲಿ ನನ್ನ ಆತ್ಮೀಯ ಗೆಳತಿ ಒಬ್ಬಳಿಗೆ ಫೋನ್ ಮಾಡ್ಲಿಕ್ಕೆ ಆಗಿರಲಿಲ್ಲ. ಅವಳಿಗೆ ಕಾದು ಕಾದು ಸಾಕಾಗಿ, ಅವಳೇ ನನಗೆ ಫೋನ್ ಮಾಡಿದ್ಲು . ನಾನು ಫೋನ್ ತಗೊಳ್ತಿದ್ದ ಹಾಗೆ ನಿನದೆ ನೆನಪು ದಿನವು ಮನದಲ್ಲಿ ಅಂಥ ಹಳೆ ಕನ್ನಡ ಹಾಡು ಹೇಳೋಕೆ ಶುರು ಮಾಡಿದ್ಲು. ನಾನು ಏನಕ್ಕೆ ಈ ಹಾಡು ಹೇಳ್ತಿದಿಯ ಅಂಥ ಕೇಳಿದೆ. ಅದಕ್ಕೆ ತಕ್ಷಣ ಅವಳು ಕೋಪದ ದನಿಯಲ್ಲಿ ನನ್ನ ನೆನಪು ನಿನಗೆ ಬರೋದೇ ಇಲ್ಲವಾ ? ಅಂಥ ಕೇಳಿದ್ಲು. ಅವಳ ಆ ಪ್ರಶ್ನೆ ನನ್ನ ಮನಸಿಗೆ ಎಷ್ಟು ನಾಟಿತು ಅಂದ್ರೆ , ನಾನು ತುಂಬ ಭಾವುಕನಾಗಿ ಹೇಳಿದೆ ನನ್ನ ಕಣ್ಣಲ್ಲಿ ನೀರು ಬತ್ತಿ ಹೋಗೋ ವರೆಗೂ ನಿನ್ನ ಮರೆಯೋದಿಲ್ಲ . ಆಗ ಅವಳಿಗೆ ಆದ ಆನಂದ ಅಷ್ಟಿಷ್ಟಲ್ಲ . ಇದು ನನ್ನ ಫ್ರೆಂಡ್ ಜೀವನ ದಲ್ಲಿ  ನಡೆದ ಸತ್ಯ ಘಟನೆ 

ಹೇ  ಹೃದಯಾ ,,,,,,ಯಾರಿಗೆ ಗೊತ್ತು ,                                                                                                                                              ಕೊನೆಯ ರಾತ್ರಿ ಯಾವುದು ಅಂತ                                                                                                                                                                                            ಕೊನೆಯ ಬೇಟಿ ಯಾವುದು ಅಂತ ...                                                                                                                                                             ಇವಾಗ ಸಮಯ ವಿದೆ ಬೇಡೋಣ ದೇವರಲ್ಲಿ .........                                                                                                                               .ಅಷಿರ್ವಾದಗಳ .... ಯಾರಿಗೆ ಗೊತ್ತು                                                                                                                                                                                                                     ಕೊನೆಯ ಉಸಿರು ಯಾವಾಗ ಹೋಗುತ್ತೆ ಅಂತ . ಅಲ್ವಾ

ಗುಡಿಸಿದ ಮೇಲೆ ಕಸವಿರಬಾರದು ,                                                                                                                                                                                     ಬಡಿಸಿದ ಮೇಲೆ ಹಸಿವಿರಬಾರದು                                                                                                                                                                    ಪ್ರೀತಿಸಿದ ಮೇಲೆ ಕೈ ಬಿಡಬಾರದು                                                                                                                                                                                    
ತಾಯಿ ಇಂದ ಜನನ ,ಪ್ರೇಯಸಿ ಇಂದ ಮರಣ ......
ಓ ಪ್ರಿಯೆ ಇದು ನ್ಯಾಯಾನ Monday, January 24, 2011
ಪ್ರೀತಿಸುವ ಮುನ್ನ  ಯೋಚಿಸು ಚಿನ್ನ 

ಇದು ಆಟೋದ ಹಿಂಬದಿ ಯಲ್ಲಿ ಬರೆದ ಬರಹ ,
ನಿಜವಾಗಿಯೂ ಪ್ರೀತಿಸುವ ಮುನ್ನ ಯೋಚಿಸಲೇ ಬೇಕು 
ಹರೆಯದ ಮಿಡಿತಕ್ಕೆ ಒಳಗಾಗುವ ಹುಡುಗಿಯರು ಇದನ್ನು ನೆನಪಿದಲೇ ಬೇಕು ,
ಪ್ರೀತಿ ಪ್ರೇಮ ಕೆಲವರಿಗೆ ಟೈಮ್ ಪಾಸ್ , ಇನ್ನೂ ಕೆಲವರಿಗೇ ಲೈಫ್ ,
ಏನೇ ಆದ್ರೂ ಬಿಸಿ ರಕ್ತದ ಬಯಕೆಗೆ ಬಲಿ ಬಿಧು ಜೀವನ ವನ್ನ ಹಾಳು ಮಾಡಿ ,
ಕೊರಾಗುವುದಕಿಂತ ಮೊದಲು ಹುಷಾರಾಗಿರಬೇಕು ...........

ಮೊದಮೊದಲು ಪ್ರೀತಿಸುವಾಗ ಯಾವುದೇ ರೀತಿಯ ಅಡೆತಡೆಗಳಿರದು ,
ಯವ್ವನದಲ್ಲಿ ಯುವತಿಯರು ಆಕರ್ಷಣೆ ಗೆ ಒಳಗಾಗಿ ಹಿಂದೂ ಮುಂದು 
ನೋಡದೇ ಪ್ರೇಮದ ಬಲೆಯಲ್ಲಿ ಬೀಳುತ್ತಾರೆ , ಆಗ ಮನೆಯವರು 
ಫ್ರೆಂಡ್ಸ್ ಸಮಾಜ ಯಾವುದಕ್ಕೂ ಗಮನಕ್ಕೆ ಬಾರದು ,ಹೊಸತನ ಕದ್ಧು
ನೋಡುವುದು ಸುತ್ತದೋದು ಪ್ರಾರಂಭ , ಆಗ ಯಾವುದೇ ರೀತಿಯ ಕಾಲ್ಮಷ್ 
ವೀರದು ,ದಿನ ನೆನಪಲ್ಲೆ ಕ್ಷಣಗಣೆ  ಒಂದ್ ಮಸ್ಸೆಗೆ . ಪ್ರಯಾಣ ಗೀತೆಗಳು 
ಮೈಮರೆತು ,ನಾನೆಂತ ಸುಖೀ ಎಂಧುಕೊಳ್ಳುವುದು ಪ್ರೀತಿಯ ಪ್ರಾರಂಭ .....

ತಮ್ಮಲ್ಲಿನ ಕಸ್ಟ ಸುಖ ಎಲ್ಲವನ್ನು ಬಚಿ ಇಟ್ತಿಧು ಎಲ್ಲವೂ ಬಿಚ್ಚಿಡಳು ಆರಂಬಿಸುತ್ತಾರೆ ,
ಒಳ್ಳೆಯ ಗೆಳೆಯ .ಅಪ್ಪ ಅಮ್ಮ ಅಣ್ಣನಾಗಿ ಅವನ ಸಲಹೆ ಸೂಚನೆ ಗಳು ಪ್ರೀತಿಯ ,
ಮಾಯೇಗೆ ಕಡಿವಾಣ ಹಾಕಿರುತ್ತದೆ ,ಪ್ರೀತಿ ಗಟ್ಟಿ ಯಾಗುತ್ತಾ ಹೋದಂತೆ ಮನಸ್ಸು 
ಸೂಕ್ಷ್ಮ ವಾಗುತ್ತೆ ,ಮುಗ್ಧ ಮಕ್ಕಳಂತೆ ಚಳ್ಲಾಟ ವಾಡುತ್ತಿಧವರು ,ಗಂಭೀರ ಸ್ವರೂಪ ತಾಳುತ್ತಾರೆ ,
ಆಕೆ ಎಲ್ಲಿ ಏನು ಮಾಡುತ್ತಲೇ ಎಂಧು ತಿಳಿದು ಕೊಳ್ಳಲು ಬೆನ್ನ ಹಿಂದೆ ಅಂಗ ರಕ್ಷಕರನ್ನ ,
ಇಡುವ ಪ್ರತಿ  ಹೆಜ್ಜೆ ತೀಕ್ಷ್ಣ ,ನೀನು ಆ ಡ್ರೆಸ್ಸು ಹಾಕಬೇಡ ,ಅವರೊಂಧಿಗೆ ಮಾತಾಡ್ಬೇಡ
ಎನ್ನುವ ಉಡಪ್ಪೇ ಸಲಹೆ ಗಳು ಚಿಂತೆ ಗಿಡು ಮಾಡುತ್ತದೆ ......

ತಾನು ಪ್ರೀತಿಸಿದ ಹುಡುಗಿ ತನಗೆ ಮರ್ಯಾದೆ ಕೊಡಬೇಕು ,ನನ್ನ ಬಿಟ್ಟರೆ ಆಕೆ ಬೇರೆ ಯಾರೊಂಧಿಗೂ ಬೇರೆಯಬಾರದು , ತನ್ನ ಗೂಡಲ್ಲಿ ಅವಳೊಂದಿಗೆ ಬದುಕಬೇಕು ಎಂಬ ಆಸೆಗಳೆಲ್ಲ ಇರಬೇಕು ಎಂಬುದು ನಿಜ .ಆದ್ರೆ ಸ್ವಾರ್ತದ ಬೆನ್ನು ಬಿಧು ಆಕೆಯ ಎಲ್ಲದಕ್ಕೂ ಕಡಿವಾಣ ಹಾಕುವುದು ,ಅವಳು ಎಲ್ಲೇ ಹೋದರು ತನ್ನನ್ನು ಕೇಳಿ ಹೋಗಬೇಕು .ಪಾಪ ಅವಳ ಆಸೆಯ ಆಸಕ್ತಿ ಅಭಿ ರುಚಿಗಳಿಗೆ ಮಣ್ಣು ಹಾಕಿವುದು ಎಸ್ಟು ಸರಿ ?

ಮೋದ ಮೊದಲು ಅವನು ಹೇಳಿಧ್ಹ ಎಲ್ಲ ಕೇಳುತ್ತೇವೆ  (ಯಾಕೆಂದ್ರೆ  ಪ್ರೀತಿ ಮಾಯೆ ),
ಆಮೇಲೆ ಮನಸ್ಸಲ್ಲಿ ಸ್ವಾಭಿಮಾನ ಮೂಡುತ್ತದೆ .ಇಸ್ಟ್ ದಿನ ಯಾರ್ ಮಾತನ್ನು ಕೇಳದೇ 
ಇವಾಗ ಅವನು ಅಂದಿಧಕ್ಕೆ ತಲೆ ಆಡಿಸುವ ನಮ್ಮ ಬದಲಾವಣೆ ನಮಗೆ ಅರ್ತ ಆಗುತ್ತೆ 
ಅವನ ಬೆದರಿಕೆಯ ಮಾತುಗಳು ಮನಸ್ಸನ್ನು ತಲ್ಲನ ಗೊಳಿಸುತ್ತದೆ ......ಕಣ್ಣಿರೆ ಆಗ 
ಜೀವನದ ಸಂಗಾತಿ ...ಆವಾಗ ಈ ಭಾವಗೀತೆ ನೆನಪಾಗುತ್ತೆ 

ಹಿಂದೆ ಹೇಗೆ ಚುಮ್ಮುತಿತ್ 
ಕಣ್ಣತುಂಬಾ ಪ್ರೀತಿ 
ಈಗ ಯಾಕೆ ಜ್ವಲಿಸುತ್ತಿದೆ 
ಏನೋ ಶಂಕೆ ಭೀತಿ 
ತಂದೆ ತಾಯಿ ಬಂಧು ಬಳಗ 
ಹೀಗೆ .......ಎಲ್ಲರಿಗಿಂತ ಪ್ರೀತಿಸಿದವರನ್ನೇ ನೆಂಚಿಕೊಳ್ಲುವಾಗ ಯಾವುದರ ಪರಿವಿಲ್ಲದೇ ಸುತ್ತಾಡುತ್ತೇವೆ .ಆತ ಬೈದನೆಂದರೆ ಕಣ್ಣಲ್ಲಿ ನೀರು ಬರುತ್ತೆ ,ತಪ್ಪಿತಸ್ತ ಭಾವನೆ ಮನದಲ್ಲಿ ಮೂಡುತ್ತೆ . ಅಡಿಕ್ಕೆ ಹೇಳುತ್ತಿರೋದು  ಗೆಳತಿ ...................................... 

ಒಮ್ಮೆ ಪ್ರೀತಿಸುವ ಮುನ್ನ ಯೋಚಿಸೆ 
Sunday, January 23, 2011


ಕಾಣಿಸದ ಕನಸಮ್ಮ ನೀನು , ಪ್ರೀತಿ ಇರೋ ಮನಸಮ್ಮ ನೀನು
ಉಸಿರಿನಲ್ಲಿ ನಿನ್ನ ಹೆಸರೇ ಹಾಡುವೆ ,ನಿನ್ನ ನೋಟದಲ್ಲಿ ನಾನೇ ಕಣಿವೆ ,
ಆದ್ರೆ ನಿನಗಾಗಿ ನಾನು ? ಅಲ್ವಾ ...

ಕಿವಿಯಲ್ಲಿ  ವೋಡ್ವ್, ಮುಖದಲ್ಲಿ ಮೋಡವೆ ,
ಫೋನ್ ಮಾಡಿದರೆ ಸಿಡಿವೆ ಆದ್ರೆ ,
ಕನಸಲ್ಲಿ ಬಂದರು ಮನಸಲ್ಲಿ ಕಾಡುವೆ ,, ಚಿ ಕಳ್ಳಿ
ನಿನ್ನ ಮೇಲೆ ತುಂಬಾ ಪ್ರೀತಿ ಇದೆ , ಆದ್ರೆ
ಹೇಳಲಾಗುತಿಲ್ಲ ,ಮನದೊಳಗೆ ತುಂಬಾ ನೋವಿದೆ ,
ಆದ್ರೆ ತೋರಿಸಲಾಗುತ್ತಿಲ್ಲ ,ನಿನ್ನನ್ನು ಭೇಟಿ ಯಾಗದೆ ,ನಾನು
ಬದುಕಬಲ್ಲೆ ಆದ್ರೆ ನೆನಪು ಮಾಡಿಕೊಂಡ್ರೆ ಬದುಕುವುದು ,,,,,
ಸಾದ್ಯವೇ ಇಲ್ಲ ..

ಅವಳೊಂದಿಗೆ ಹೃದಯದ ಪ್ರೀತಿ ಹಂಚಿಕೊಂಡು ನಾನು
ತುಂಬಾ ನೋವು ಅನುಭವಿಸಿದೆ , ನನ್ನ ಮುಗ್ಧ ಪ್ರೀತಿ ,
ಮೇಲೆ ಸಮಾಜದ ಕೆಟ್ಟ ಕಣ್ಣು ಬಿತು ....................
ಇವತ್ತಿಗೂ ನನಗೆ ಅವನನ್ನು ಬಿಟ್ಟು ಹೋಗುವ ಮನಸಿಲ್ಲ ,
ಹಾಗಾಗಿ ಶವ ಪೆಟ್ಟಿಗೆಯ ಒಳಗಿನಿಂದಲೇ  ಕಾತಾರಿಸುತ್ತಿವೆ
ನನ್ನ ಕೈ ಗಳು ಅವಳ ತಭು ಗೆ ಗಾಗಿ . ಓ ಪ್ರಿಯೆ ಇದು ನ್ಯಾಯನ ....

Thursday, January 20, 2011

                   ಬನ್ನಿ ಫ್ರೆಂಡ್ಸ್ ಮೂರುಢೇಶ್ವರಕ್ಕೆ  ನಿಮ್ಮನ್ನ ಕೈ ಬಿಸಿ ಕರೆಯುತ್ತಿದೆ

Wednesday, January 19, 2011
ನನ್ನ ಬಿಟ್ಟು ಹೋದಾವಳಿಗಾಗಿ ...........

ನಿನ್ನ ಬೆಟ್ಟಿ ಯಾಗದಿದ್ರೆ , ಕಣ್ಣಲ್ಲಿ ನೀರು ಬರುತ್ತೆ
ನಿನ್ನ  ಮೇಲಾನೇ  ಗೆಳತಿ , ನಿನ್ನ ನೆನಪು ಆಗದ ,
ದಿನ ಹಗಲು ರಾತ್ರಿಯಾಗುವುದಿಲ್ಲ ,

ನಿನ್ನ ಪ್ರತಿ ಮಾತು ಕೂಡ ನನ್ನ ನೆನಪಿನಲ್ಲಿದೆ ,
ನಿನ್ನ ಸ್ನೇಹ ದಿಂದ ಜೀವನ ತುಂಬಾ ಕುಶಿ ಯಾಗಿದೆ ,
ನಾನು ಇಡೀ ಜಗತ್ತನ್ನೇ ಮರೆಯಬಹುದು ಆದ್ರೆ ನಿನ್ನನ್ನು ಮಾತ್ರ ಮರೆಯಲಾರೆ ,

ನೀನು ಹೊರಟು ಹೋದ್ರೆ ಯಾರು ಕೂಡ ಕುಶಿ ಯಾಗಿ ಇರೋದಿಲ್ಲ ,
ನೀನು ಇಲ್ಲದಿದ್ರೆ ತಾರೆ ಯಲ್ಲೂ ಕಾಂತಿ ಇರೋದಿಲ್ಲ ,ಏನು ಹೇಳು
ನನ್ನ ಹೃದಯದಲ್ಲಿ ನೀನು ಇಲ್ಲದಿದ್ರೆ ,ನಾನು ಬದುಕಿ ಇರಬಹುದು ಆದ್ರೆ
ಬದುಕು ಇರೋದಿಲ್ಲ ,,,........ ಓ ಪ್ರಿಯೆ ಇದು ನ್ಯಾಯಾನಾ....

Monday, January 17, 2011


ನಿನ್ನ ಕಣ್ಣಿರು ಆಗಿದ್ಹರೆ...ನಿನ್ನ ಕಣ್ಣಲ್ಲಿ ಹುಟ್ಟಿ ,ಕೆನ್ನೆಯಲ್ಲಿ ಬದುಕಿ ,
ಮಡಿಲಲ್ಲಿ ಸಾಯುತಿದ್ದೆ,ಆದ್ರೆ ನೀನು ನನ್ನ ಕಣ್ಣಿರು ಆಗಿದ್ಹರೆ ನಾನು ,
ಅಳುತ್ತಲೇ ಇರಲಿಲ್ಲ ,ಯಾಕೆಂದರೆ ನಿನ್ನನ್ನು ಕಳೆದು ಕೊಳ್ಳೋದು ,
ನನಗೆ ಇಷ್ಟ ಇಲ್ಲ ... ಅದ್ರು ಮೋಸ . ಓ ಪ್ರಿಯೆ  ಇದು ನ್ಯಾಯನ

Sunday, January 16, 2011

ಒಂಟಿ ಮನಸಿನ ಪಯಣ

ಒಂಟಿ ಮನಸಿಗೆ ಜಂಟಿಯಾಗಲು
ಜೊತೆಗಾರರು ಯಾರು ಇಲ್ಲ
ಮಾತುಗಳು ಬಹಳ ಕೇಳುವವರು ವಿರಳ
ಶುರುವಿಟ್ಟಿಹುದು ತಂತಾನೆ ಮಾತಾಡಿಕೊಳ್ಳುವುದು

ಅರಿವುಂಟು ಈ ಮನಕೆ ಕೇಳುವ ಕಿವಿಗಳು
ಈ ಜಗದಲ್ಲಿ ಇಲ್ಲ ಎಂದು
ಭಯವೂ ಇಲ್ಲ ಕರೆಯುವರು ಇದನ್ನ ಹುಚ್ಚು ಎಂದು

ದುಃಖ ಉಮ್ಮಳಿಸಿದಾಗ ಕಣ್ಣೀರು ಹರಿದಾಗ
ಬತ್ತಿ ಹೋಗುತಿದೆ ತಂತಾನೆ ಒರೆಸುವರು ಇಲ್ಲದಂತಾಗಿ
ಪ್ರಶ್ನೆಯ ಮೇಲೆ ಪ್ರಶ್ನೆಯ ಹಾಕುತಿದೆ
ಯಾರ ಹತ್ತಿರ  ದುಃಖ ಹೇಳಿ   ಕೊಳ್ಳಲಿ ಎಂದು
ಬೆಟ್ಟದಷ್ಟಿಹುದು ಮನಸಿನ ಕನಸುಗಳು
ಕೊನೆಯೇ ಇಲ್ಲದ ಮುಗಿಲಂತಿಹುದು ಮನಸಿನ ಮಾತುಗಳು

ಬರೆಯುತ್ತೆ ಹಾಡುತ್ತೆ ನಡೆಯುತ್ತೆ ಕುಣಿಯುತ್ತೆ
ತಂಗಾಳಿಯಲ್ಲಿ ತೇಲಾಡುತ್ತೆ ಯಾವಾಗಲು ಒಂಟಿಯಾಗಿರುತ್ತೆ
ಈ ಬಾಳ ಬಂಡಿಯಲಿ ತಾನೊಬ್ಬನೇ
ಪಯಣಿಗನೆಂದು ಅರಿತು ಮತ್ತೆ ಮುನ್ನುಗ್ಗುತ್ತೆ,,,,,,,,,,,,,,,,,,,,,,

Thursday, January 13, 2011

ಅವನೊಡನೆ ಹೋಗಬೇಡವೆಂದ
ತಾಯ್ತಂದೆಯ ಕಾಳಜಿ
ಕಟ್ಟಳೆಯಂತೆ
ಅವರು ಒರೆಸಿಕೊಂಡ ಕಣ್ಣೀರು
ನಾಟಕದಂತೆ
ತೋರಿದ  ಹುಡುಗಿಗೆ,

ಹಳೆಯ ಗೆಳೆಯರೊಂದಿಗೆ
ಮಾತನಾಡಬೇಡವೆಂದು
ಸಿಡುಕಿದ ಪ್ರೇಮಿಯ
ಕಟ್ಟಳೆಗಳು
ಉತ್ಕಟ ಪ್ರೇಮವೆಂದು
ಭಾಸವಾದರೆ...

ಅದಕ್ಕೆ ಕಾರಣ
ವಯಸ್ಸೋ?
ಪ್ರೇಮವೋ?


Wednesday, January 12, 2011
ನನ್ನ ಎರಡೂ ಕಣ್ಣುಗಳು
ಕುರಡಾಗಿ ಹೋಗಲಿ ದೇವರೇ
ನನ್ನವಳ ನಾ ನೋಡಿದ ದಿನವೇ ........!

ನನ್ನ ಎರಡು ಕಿವಿಗಳು
ಕಿವಿಡಾಗಿ ಹೋಗಲಿ ದೇವರೇ
ನನ್ನವಳ ಮಾತು ನಾ ಕೇಳಿದ ದಿನವೇ ......!

ನನ್ನ ಮಾತುಗಳೆಲ್ಲವೂ
ನಿಂತು ಹೋಗಲಿ ದೇವರೇ
ನನ್ನವಳು ನನ್ನ ನೋಡಿ ನಕ್ಕ ದಿನವೇ ........!

ನನ್ನ ಈ ಉಸಿರೇ
ನಿಂತು ಹೋಗಲೀ ದೇವರೇ
ನನ್ನವಳು ನನ್ನ ಪ್ರೀತೀ ಒಪ್ಪಿಕೊಂಡ ದಿನವೇ .......!

ನನ್ನ ಉಸಿರು ನಿಂತ ಬಳಿಕ
ನನ್ನವಳ ಹಾದಿಯಲ್ಲಿ ನನ್ನ ಶಿಲೆಯಾಗಿ ನೆಲಸು ದೇವರೇ
ಹಾಗಲೂ ನನ್ನವಳ ಸ್ಪರ್ಶ ನನಗೆ ಹಿತವೆನಿಸುತದೆ ...........!!!

ಸುಂದರ ಬದುಕಿದೆ
ನನ್ನವರೆಲ್ಲರೂ ಇದ್ದಾರೆ
ಯಾವ ಕೊರೆತೆಯೂ ಇಲ್ಲ
ಬಾಳುವಾಸೆ ಅತಿಯಾಗಿದೆ
ಆದರೆ........
ನನ್ನ ಜೀವ ದಿನ ಎಣಿಸುತಿದೆ
ಕಾರಣ.......
ವಯಸ್ಸಲ್ಲಿ ಕುಡಿದು ತೇಗಿದ್ದು....
ಇಂದು ಮರಣಕ್ಕೆ ಹತ್ತಿರವಾದೆ
ಇನ್ನೆಲ್ಲಿ ......
ಬಾಳುವಾಸೆ ನನ್ನವರೊಟ್ಟಿಗೆ.
ಚಟ್ಟವನ್ನೇ ......
ಬಯಸಬೇಕಿದೆ ಈ ಮಧ್ಯವಯಸ್ಸಿಗೆ..?!!!Tuesday, January 11, 2011


ಕಣ್ಣು ತೆರೆದರೂ.. ಕಣ್ಣು ಮುಚ್ಚಿದರೂ..
ಬೆಳಗುತ್ತವೆ ಇವಳ ಕಣ್ಣುಗಳಲಿ
ಬೆನ್ನಿಗೆ ಬೆಳಕ ಕಟ್ಟಿಕೊಂಡು
ಹಾರುವ ಮಿಂಚುಹುಳುಗಳ ಹಾಗೆ
ನನ್ನ ಕಣ್ಣಿಗೂ ಬಾರದ...
ನಿಮ್ಮ ಕಣ್ಣಿಗೂ ನಿಲುಕದ...
ಕನಸುಗಳು.........
ಎಲ್ಲಾದರೂ ಆದೀತು,
ಆ ನದಿಯ ದಂಡೆಯಾದರೂ
ಈ ತೀರದ ಬಂಡೆಯಾದರೂ
ನೀನೆಲ್ಲಿರುವೆಯೆಂದು ಗೊತ್ತಿಲ್ಲದಿರುವಾಗ...

ಮನವ ಹೊತ್ತೊಯ್ಯಲ್ಲಿ 
ಅಪ್ಪಳಿಸಿದ ಅಲೆಗಳಿಂದು
ಗುರಿಯೇ  ಇಲ್ಲದಿರುವಾಗ
ನಾವಿಕನೇಕೆ? ನೌಕೆಯೇಕೆ?
ಹೋಗಿ ಸೇರಲಿ ಎಲ್ಲಾದರೂ
ಮನಸು ಮೈಮರೆಯುವಲ್ಲಿಗೆ

ಬಯಕೆಗಳ ಭಾರಕ್ಕೆ
ಬೆನ್ನು ಬಾಗಿರುವಾಗ 
ಪಯಣ ಮಾಡಬೇಕೆ
ಬವಣೆಗಳ ಇನ್ನೊಂದು ತೀರಕ್ಕೆ?

ನಿನ್ನ ಇರುವಿಕೆಯ ಸುಳಿವಿಲ್ಲ
ನನ್ನೊಳಗೆ 'ನಾನು' ತುಂಬಿರುವಾಗ
ಬರುವಿಕೆಯ ಕಾಯುತಿರುವೆನೆಂದು 
ಹೇಳಿರುವುದು ಸುಳ್ಳಾಗಿರುವಾಗ
ನೀ ಬರುವ ಸೂಚನೆಯೂ ಇಲ್ಲ

ಆದರೂ ಕಾಯಲೇನು?
ಕ್ಷಮಿಸಲಾದರೂ ಒಮ್ಮೆ ಬರುವೆಯೇನು?
ಕರುಣೆಯಿಂದಾದರೂ..
ಪ್ರೀತಿಯಿಂದಾದರೂ...
ಭಿಕ್ಷೆಯೆಂದಾದರೂ...
ದಾನವೆಂದಾದರೂ..

ಹೇಗಾದರೂ ಸರಿ...
ಒಂದು ಹಿಡಿ ಪ್ರೀತಿಯ
ಕೊಡುವೆಯೇನು?
ಹೇಳು, ಹೇಳು,
ನಾ ಕಾಯಲೇನು


ನನ್ನ ನೀ
ಒಂದು ಕ್ಷಣವೂ
ಪ್ರೀತಿಸದಿದ್ದರು ಚಿಂತೆಯಿಲ್ಲ
ಕಡೆಯ ಪಕ್ಷ
ನಿನ್ನ ಕಿರು ನಗೆಯ ವರವ
ಕೊಡುವುದಾದರೆ ಚಿತೆಯಿಂದ
ಎದ್ದು ಬಂದು ಸ್ವೀಕರಿಸುವೆ
ಮರು ಜನ್ಮಕೆ ಕರುಣಿಸುವುದಾದರೆ
ಈ ಕ್ಷಣವೇ ಮಡಿದು
ನನ್ನೊಲವಿನ ಗೋರಿಯಾಗುವೆ :)...........
ಹಾಯ್,


ಹಾಯ್,
ಕಣ್ಣಂಚಿನ ನೀನು..
ತುಟಿಯಂಚಿನ ಮಾತು,
ಹೃದಯದಾ ಬಿಸಿಯುಸಿರು..
ಎದೆಯೊಳಗಿನ ಭಾವ..
ಆ ಬೆಚ್ಚಗಿನ ಸ್ಪರ್ಶ..
ನಿದ್ದೆಯೋಳಗಿನ ಕನಸು..
ವಾಸ್ತವದ ನನಸು..
ಇಷ್ಟು ಸಾಕಲ್ಲವೇ ನನಗೆ.!!?
ನಿನ್ನ ಮೇಲಿನ ಪ್ರೀತಿಯ ತಿಳಿಸಲು..!!