Monday, February 14, 2011


ಬೆಚ್ಚಗೆ ನಿನ್ನ ನೆನಪು.....

ಮುಂಜಾನೆಯ ಚಳಿಯಲ್ಲಿ ಬೆಚ್ಚಗೆ ನಿನ್ನ ನೆನಪು
ನೆನೆ ನೆನೆದು ನಿನ್ನ ಹೆಸರ ಕನವರಿಸುತಿದೆ ಮನವು
ಹುಡುಕಿದರೂ ಸಿಗಲಿಲ್ಲ ಎಲ್ಲು ನಿನ್ನ ಸುಳಿವು
ಮನದಾಳದಲ್ಲಿ ಕಾಡುತಿದೆ ನೀ ಬಿಟ್ಟು ಹೋದ ಒಲವು

ಸೂರ್ಯನು ಬರುವ ಮುಂಚೆಯೇ ನಿನ್ನ ನೋಡಬೇಕೆಂಬ ಕಾತುರ
ಮಲ್ಲಿಗೆ ಅರಳುವ ಮುನ್ನ ನಿನ್ನ ಮಾತಾಡಿಸಬೇಕೆಂಬ ಆತುರ
ನಿನ್ನ ಇಷ್ಟು ಕಾಡೋಕೆ ಕಾರಣ ನೀ ಕೊಟ್ಟ ಸದರ
ನಿನ್ನ ಜೊತೆ ನಾ ಕಳೆದ ಕಾಲ ಬಲು ಮಧುರ


ನೀನೊಂದು ಕಡಲು, ನಾನೊಂದು ನದಿ
ನಿನ್ನ ಸೇರುವುದೇ ನನ್ನ ಗುರಿ
ಅದಕ್ಕಾಗಿ ಹುಡುಕುತಿಹೆ ಹರಿಯುವ ದಾರಿ
ನೀ ಈಗ ಎಲ್ಲಿರುವೆ ನಾರಿ
ನಾ ಬರೋದು ಲೇಟಾದರೆ ಸಾರಿ!!!


ಯಾಕೆ ಹೀಗಾಯ್ತು ???..

ಹೂವಿನ ಅಂದ ಮೈಯರಳಿ ನಿಲ್ಲುವುದು ಕಿರಣಗಳ ಸ್ಪರ್ಶದಿಂದ.
ದುಂಬಿಯೊಂದು ಹರ್ಷಿಸುವುದು ಪರಿಮಳ ಭರಿತ ಮಲ್ಲಿಗೆಯ ರಸಪಾನದಿಂದ..
ಪದಗಳು ಹುಟ್ಟುವುದು ನಿನ್ನ ಅಂದದಿಂದ....
ಮೈಮರೆತು ಹಾಡೊಂದು ಗುನುಗುತಿರುವೆನು ನಿನ್ನ ನಾ ಕಂಡ ಕ್ಷಣದಿಂದ !!!.....

Friday, February 11, 2011


ಇದು ನನ್ನ 'ಪ್ರೊಫೆಶನಲ್' ಪ್ರೀತಿ...


WD
ಹಿಂದೆ ಲವ್ ಮಾಡಿಲ್ಲ, ಮುಂದೆನೂ ಮಾಡಲ್ಲವೆಂದು ಭೀಷ್ಮ ಪ್ರತಿಜ್ಞೆ ಮಾಡಿ ಕಾಲೇಜು ಮೆಟ್ಟಿಲು ಹತ್ತಿದ್ದವ ನಾನು. ಕಳೆದ ವರ್ಷ ಇದೇ ಸಮಯದಲ್ಲಿ ನಾನು ಫೈನಲ್ ಇಯರ್ ಡಿಗ್ರಿಯಲ್ಲಿದ್ದೆ, ಕೆಲವು ಗಂಡು ಹುಡುಗರು, ಹೆಣ್ಣು ಹುಡುಗಿಯರು ಅದೇನೋ ಲವ್ ಅಂತ ಮಾಡುತ್ತಿದ್ದರು. ಅವರ ಲವ್ ಅಂದರೆ ಒಂದೆರಡು ದಿನ ಹುಡುಗಿಯೊಂದಿಗೆ ಸುತ್ತಾಡಿ, ಜಾಲಾಡಿ, ಅದರೊಂದಿಗೆ ಮತ್ತೊಬ್ಬರಿಗೆ ಎಸ್ಎಂಎಸ್ ಕಳುಹಿಸುತ್ತಾ ಕಾಲ ಕಳೆಯುತ್ತಿದ್ದರು.

ಒಟ್ಟಿನಲ್ಲಿ ಆಗಾಗ್ಗೆ ಚೇಂಜ್ ಮಾಡಿಕೊಳ್ಳುತ್ತಾ ಆಡುತ್ತಿದ್ದ ಲವ್ ಆಟವಾಗಿತ್ತದು. ಅವಳೇನಾದರೂ ಫ್ರೀ ಇದ್ದರೆ ಅವಳೊಂದಿಗೆ ಸುತ್ತಾಡುವುದು, ಆವಾಗಲೂ ಸಹ ಸೇಫ್ಟಿಗಾಗಿ ಇನ್ನೊಬ್ಬಳಿಗೆ ಗಾಳ ಹಾಕುವುದು ಮುಂದುವರಿದೇ ಇತ್ತು. ಇದು ಅವರ ರೂಟೀನ್ ಜಾಬ್.

ಇವರು ವ್ಯಾಲೆಂಟೈನ್ಸ್ ಡೇ ಅನ್ನು ಬಹಳ ಅದ್ದೂರಿಯಿಂದ ಆಚರಿಸುವ ಕೆಟಗರಿ. ವರ್ಷದ ಪ್ರತಿ ದಿನವೂ ಪ್ರೇಮಿಗಳ ದಿನ ಆದರೆ ಒಳ್ಳೆಯದಿತ್ತು ಎಂಬುದು ಇವರ ಯೋಚನೆ. ಇದು ಸ್ವಘೋಷಿತ ಪ್ರೊಫೆಶನಲ್ ಲವರ್‌ಗಳ ಪ್ರೊಫೈಲ್. ಆದರೀಗ ಹುಡುಗಿಯರಲ್ಲಿಯೂ ಇಂಥದ್ದೊಂದು ಬ್ರಾಂಚ್ ಇದೆ ಎನ್ನುವುದು ಸಂತಸಕರ. ಏಕೆಂದರೆ ಅವರಿಗೆ ಕೊಟ್ಟ ಸ್ವಾತಂತ್ರ್ಯವನ್ನು ಅವರು ಪೂರ್ಣವಾಗಿ ಉಪಯೋಗಿಸುತ್ತಿರುವುದು ಸಂತಸವಲ್ಲದೆ, ಮತ್ತೇನು...? ಒಟ್ಟಿನಲ್ಲಿ ಅವರು ಇವರಿಗೆ ಇವರು ಅವರಿಗೆ ಇ-ಗ್ರೀಂಟಿಂಗ್ಸ್ ಸರಬರಾಜು ಮಾಡುತ್ತಲೇ ಇರುತ್ತಿದ್ದರು.

ಇನ್ನೂ ಕೆಲವು ಕೆಟಗರಿಗಳಿವೆ ಅವುಗಳು ಇಲ್ಲಿ ಮುಖ್ಯವಲ್ಲ ಬಿಡಿ. ಒಂದರಲ್ಲಿ, ಓದುವುದು ಬಿಟ್ಟು ಬೇರೇನೂ ತಿಳಿಯದವರು, ಇನ್ನೊಂದರಲ್ಲಿ, ಓದೂ ಇಲ್ಲ, ಲವ್ವೂ ಇಲ್ಲದ ಕೈಯಲ್ಲಿ ಬಾಲ್, ಬ್ಯಾಟ್ ಹಿಡಿದು 24 ತಾಸು ಸ್ಪೋರ್ಟ್ಸ್‌ಮೆನ್, ಯಾವಾಗ ನೋಡಿದ್ರೂ ಆನ್‌ಲೈನ್ ಗೇಮ್‌ನಲ್ಲೇ ನಿರತವಾಗಿರುವವರು ಇತ್ಯಾದಿ ಇತ್ಯಾದಿ.

ಇದರಲ್ಲಿ ನನ್ನದು ಯಾವ ಬ್ರಾಂಚ್‌? ನನ್ನದು ಪ್ರೊಫೆಷನಲ್ ಕೆಟಗರಿ, ಗ್ರಂಥಾಲಯದ ಹುಳು, ಕಂಪ್ಯೂಟರ್ ವೈರಸ್ ಅಂತಲೇ ಪ್ರಖ್ಯಾತಿ ಹೊಂದಿದ್ದೆ. ಕೆಲವೊಮ್ಮೆ ಅದು ಕುಖ್ಯಾತಿಯೂ ಆಗುತಿತ್ತು. ನನ್ನ ಗೆಳೆಯರು ಮತ್ತು ಗೆಳತಿಯರನ್ನು ನಾನು ಕೂಡ ಪ್ರೀತಿಸುತ್ತಿದ್ದೆ.ಅವರೊಂದಿಗೆ ಸುತ್ತಾಡುವುದು ನನ್ನಿಷ್ಟದ ಸಂಗತಿಯೂ ಹೌದು. ಅವರು ಸುತ್ತಾಡಿಸಿದಲ್ಲಿಗೆ ನಾನೂ ಹೋಗುತ್ತಾ, ಹೊಸ ತಾಣಗಳು, ಹೊಸ ಟೂಲ್‌ಗಳು, ಹೊಸ ಹೊಸ ತಂತ್ರಜ್ಞಾನಗಳೊಂದಿಗೆ ನನ್ನ ಜ್ಞಾನ ಸಂಪಾದನೆಯೂ ಆಗುತ್ತಿತ್ತು.

ನಾನು ಈ ವ್ಯಾಲೆಂಟೈನ್ಸ್ ಡೇಗೆ ಸಂಬಂಧಪಟ್ಟ ಪ್ರೀತಿಯನ್ನು ಎಂದಿಗೂ ಯಾರೊಂದಿಗೂ ಮಾಡಿಲ್ಲ ಎಂದುಕೊಂಡಿದ್ದೆ. ಆದರೆ ಈಗ ತಿಳಿಯುತ್ತಿದೆ. ದ್ಯಾಟ್ ಟೈಮ್ ಐ ವಾಸ್ ಇನ್ ಲವ್ ಅಂಥ. ಲವ್ ಗಿವ್ ಅಂಥ ಕೆಲವು ಗೆಳತಿಯರಲ್ಲಿ ಹುಚ್ಚಾಟ ಮಾಡುತ್ತಿದ್ದೆ. ಅವರಿಗೂ ಅದು ತಿಳಿದಿದ್ದುದರಿಂದ ಅದು ಹುಚ್ಚಾಟಕ್ಕೆ ಮಾತ್ರ ಸೀಮಿತವಾಗಿತ್ತು.

ಒಮ್ಮೆ ಅವರೆಲ್ಲರಿಗಿಂತಲೂ ಹೆಚ್ಚು ಆಕರ್ಷಕವಾದ, ಬುದ್ಧಿವಂತೆಯಾದ, ಬ್ಲಾಕ್ ಬ್ಯೂಟಿಯೊಬ್ಬಳು ನನ್ನ ಅಪ್ಪನಿಂದ ಪರಿಚಿತವಾದಾಗ, ನಕಲಿ ಸಾಫ್ಟ್‌ವೇರ್ ಬಳಸುತ್ತಿದ್ದವನಿಗೆ ಅಸಲಿ ಸಾಫ್ಟ್‌ವೇರ್ ಸಿಕ್ಕಿದಂತಾಯಿತು. ಅವಳನ್ನು ಬಿಟ್ಟಿರಲಾಗುತ್ತಿರಲಿಲ್ಲ, ಸಮಯ ಸಿಕ್ಕಾಗಲೆಲ್ಲಾ ಅವಳನ್ನು ಮಾತನಾಡಿಸುವುದೇ ನನ್ನ ಕೆಲಸವಾಗಿತ್ತು. ಅವಳನ್ನು ನಾನು ಮಾತಾಡಿಸುವ ಸಮಯದಲ್ಲಿ ಬೇರೆ ಯಾರಾದರೂ ಅಡ್ಡ ಬಂದರೆ ಕೆಟ್ಟ ಕೋಪ ಬರುತ್ತಿತ್ತು. ಇದೂ ಎಕ್ಸ್‌ಟರ್ನಲ್ ಅಫೇರ್ ಆಗಿದ್ದರಿಂದ ಕಾಲೇಜಿಗೂ ಇದಕ್ಕೂ ಸಂಬಂಧವಿರಲಿಲ್ಲ. ನನ್ನ ಪರೀಕ್ಷೆಗಳೆಲ್ಲ ಮುಗಿದ ಮೇಲೆ ಸಮಯ ಸಿಕ್ಕಾಗಲೆಲ್ಲ ಅವಳ ಮುಂದೆ ಕೂತು ಮಾತನಾಡುತ್ತಿದ್ದೆ, ಹರಟುತ್ತಿದ್ದೆ, ಅವಳನ್ನು ನನ್ನಿಷ್ಟದ ಪ್ರಕಾರ ಬಳಸುತ್ತಿದ್ದೆ, ಒಟ್ಟಿನಲ್ಲಿ ನಾನು ಮತ್ತು ಅವಳು ಲವ್‌ನಲ್ಲಿ ಬಿದ್ದಿದ್ದೆವು!

ಹೀಗೆ ಕಾಲ ಕಳೆಯುತ್ತಿರುವಾಗ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ನೌಕರಿಗೆ ಆಯ್ಕೆಯಾದ ವಿಷಯ ತಿಳಿಯಿತು, ಇಂಟರ್‌ವ್ಯೂಗೆ ಬರುವಂತೆ ಕೂಡ ಇ-ಮೇಲ್ ಸಿಕ್ಕಿತು. ಅದನ್ನೂ ನನ್ನ ಕೈಗಿತ್ತವಳು ಇವಳೇ. ಈ ಹಿಂದೆ ಒಂದು ಬಿಪಿಒ ಕಂಪೆನಿಗೂ ಆಯ್ಕೆಯಾಗಿದ್ದೆ. ಆದ್ದರಿಂದ ನನ್ನಲ್ಲಿ ಎರಡು ಆಯ್ಕೆಗಳಿದ್ದವು. ಆದರೂ ಮನಸ್ಸಿನಲ್ಲೊಂದು ಕಡೆ, ಇವಳನ್ನು ಬಿಟ್ಟಿರಬೇಕಲ್ಲಾ ಎಂಬ ತಳಮಳ.

ಏನೇ ಆಗಲಿ, ಮುಂದೆ ಸಾಗುವೆ ಎಂದು ಇಂಟರ್‌ವ್ಯೂಗೆ ಬಂದೆ. ಆಗ ಆಯಿತು ಕಹಾನಿ ಮೇ ಟ್ವಿಸ್ಟ್... ಇಂಟರ್ವ್ಯೂ ತಾಣಕ್ಕೆ ಬಂದಾಗ ಅಲ್ಲೊಬ್ಬಳು ನನ್ನವಳಿಗಿಂತಲೂ ಜಾಣೆಯಾಗಿದ್ದಳು. ಸ್ಲಿಮ್, ಅಟ್ರ್ಯಾಕ್ಟಿವ್, ಸ್ಮಾರ್ಟ್, ಬ್ಲ್ಯಾಕ್ ಬ್ಯೂಟಿ, ಮಾತ್ರವಲ್ಲ ಪ್ರೊಫೆಶನಲ್ ಬೇರೆ!. ಇವಳಿಂದ ಆಕರ್ಷಿತನಾದೆ. ಇದರಿಂದಾಗಿ ಎರಡು ಆಯ್ಕೆಗಳಲ್ಲಿ ಇದೇ ಬೆಟರ್ ಅನ್ನಿಸಿತು. ಈ ಕಂಪನಿಗೆ ಸೇರುವುದು ಪಕ್ಕಾ ಆಯಿತು. ಯಶಸ್ವಿಯಾಗಿ ಇಂಟರ್‌ವ್ಯೂ ಮುಗಿಸಿ ಮನೆಗೆ ವಾಪಸಾದೆ. ಅಲ್ಲಿ ಅವಳು ನನಗಾಗಿ ಕಾಯುತ್ತಿದ್ದಳು. ಒಂದೆರಡು ದಿನಗಳಲ್ಲಿ ಆ ಕಂಪನಿಯಿಂದ ಮೆಸೇಜ್ ಸಿಕ್ತು ನೀವು ಆಯ್ಕೆಯಾಗಿದ್ದೀರಿ ಅಂತ. ಆಗಲೂ ಇನ್‌ಬಾಕ್ಸ್‌ನಲ್ಲಿದ್ದ ಈ ಸಂದೇಶವನ್ನು ನನ್ನ ಕೈಗಿತ್ತವಳು ಇವಳೇ. ಆಗ ನನಗಾದ ವಿರಹ ವೇದನೆ ಅಷ್ಟಿಷ್ಟಲ್ಲ. ಹೇಗೋ ಬಿಟ್ಟು ಬಂದೆ.

ಹೊಸ ತಾಣ. ಕೆಲವೇ ದಿನಗಳಲ್ಲಿ ಇಲ್ಲಿನವಳೇ ನನಗೆ ಆಪ್ತಳಾದಳು. ನಂತರ ಸ್ನೇಹ, ಪ್ರೀತಿ ಸಿಕ್ಕಾಪಟ್ಟೆ ಫಾಸ್ಟ್ ಆಗಿಯೇ ಆಗಿ ಹೋಯ್ತು. ಹೀಗೆ ದಿನ ಕಳೆಯುತ್ತಿರುವಾಗ ನಾನೊಮ್ಮೆ ರಜೆ ತೆಗೆದುಕೊಂಡು ಊರಿಗೆ ಹೋದೆ. ನಾನೆಣಿಸಿದ್ದೆ ಅವಳು ನನಗಾಗಿ ಕಾಯುತ್ತಿರಬಹುದೆಂದು, ಆದರೆ ಹಾಗಾಗಲಿಲ್ಲ. ಅವಳು ಬೇರೊಬ್ಬರಿಗೆ ಹೊಂದಿಕೊಂಡಿದ್ದಳು. ನಾನು ಅವಳನ್ನು ಮಾತನಾಡಿಸಿದೆ. ಆದರೆ ಅಷ್ಟು ಸಲಿಗೆ ಇರಲಿಲ್ಲ. ಆಗ ನಾನು ಸ್ವಘೋಷಿತ ಪ್ರೊಫೆಶನಲ್ ಲವರ್ ಹಾಗೆಯೇ ಮನಸ್ಸಿನಲ್ಲಿಯೇ "ಚಿಂತಿಸಬೇಡ ಮ್ಯಾನ್. ನಿನಗೆ ನಿನ್ನ ನೌಕರಿಯ ತಾಣದಲ್ಲಿ ಮತ್ತೊಂದು ಆಯ್ಕೆ ಇದೆಯಲ್ಲ" ಅಂತ!

ಈಗ ನನ್ನ ಲವ್‌ಗೆ ವೈರಸ್ ದಾಳಿ ಮಾಡದಂತೆ ಪಕ್ಕಾ ಆಂಟಿವೈರಸ್ ಇಲ್ಲಿದೆ. ನನ್ನ ಸೆಕೆಂಡ್ ಡೀಪೆಸ್ಟ್ ಲವ್ ಮುಂದುವರಿಯುತ್ತಿದೆ... ಅಡ್ಡಿ ಪಡಿಸಬೇಡಿ...

ಇತೀ,
ಮುಂದಿನ ಪ್ರೇಯಸಿ Windows-7 ಗಾಗಿ ಕಾಯುತ್ತಿರುವ...
ಪ್ರೊಫೆಶನಲ್ ಎಕ್ಸ್‌ಪಿ ಕಂಪ್ಯೂಟರ್ ಪ್ರೇಮಿ

Sunday, February 6, 2011


ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ..!
ನಿಜಕ್ಕೂ ಅವಳಲ್ಲಿ ಅಂತಹಾ ಸೌಂದರ್ಯವಿರಲಿಲ್ಲ... ಆದರೂ ಅವಳಂದ್ರೆ ನನಗಿಷ್ಟ. ಯಾಕೆ..? ಊಹುಂ.. ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗುವುದೋ ಎಂದು ಮಧ್ಯರಾತ್ರಿಗಳಲ್ಲೂ ಎದ್ದು ಮನಸ್ಸಿನ ಬುಡ್ಡಿಗೆ ಕನಸಿನ ಎಣ್ಣೆ ಹೊಯ್ದು ತಡಕಾಡಿದ್ದಿದೆ. ಬೀರುವಿನಲ್ಲಿಟ್ಟದ್ದನ್ನು ಹುಡುಕುವವನಂತೆ. ನನ್ನಲ್ಲೇ ಕೇಳಿಕೊಂಡು ಸುಸ್ತಾಗಿ ಅವಳ ಮಡಿಲಲ್ಲೇ ನಿದ್ದೆ ಮಾಡುವವನಂತೆ ಬಿದ್ದುಕೊಂಡ ದಿನಗಳೆಷ್ಟೋ.. ಉತ್ತರ ಮಾತ್ರ ನನ್ನಿಂದ ದೂರ... ಬಹುದೂರ.. ಇನ್ನೂ ಸಿಕ್ಕಿಲ್ಲ..!

ನಾನಂದ್ರೆ ಅವಳಿಗೂ ಇಷ್ಟ..! ಯಾಕೆ..? ಅವಳಿಗೂ ಗೊತ್ತಿಲ್ಲ.. ಉತ್ತರ ಸಿಕ್ಕಿಲ್ಲವೆಂದಲ್ಲ. ಹುಡುಕ ಹೋದವಳು ಇನ್ನೂ ಬಂದಿಲ್ಲ. ಬಹುಶಃ ಬರುವುದಿಲ್ಲ.. ಹೊತ್ತು ನೆತ್ತಿಗೆ ಬಂದರೂ ಇನ್ನೂ ಎರಡು ಜಡೆಯ ಹುಡುಗಿಯ ಕನಸು ಕಾಣುತ್ತಿರುವ ನನಗಿದು ಅರ್ಥವಾಗದು ಎಂದವಳಂದುಕೊಂಡಿರಬಹುದೇ?

ಬರುತ್ತಾಳೆನ್ನುವುದು ನನ್ನ ಪ್ರೀತಿಯ ನಂಬಿಕೆ; ಬರುವುದು ನನ್ನ ಪ್ರೀತಿಯ ಸಾಮರ್ಥ್ಯ. ಬರಬಹುದು, ಬರದಿದ್ದರೆ... ಬರುತ್ತಾಳೆ.. ಬರಲೇಬೇಕು. ಗೊಂದಲಗಳು ಕುಣಿಯುತ್ತಿವೆ.. ಮತ್ತೆ ಮತ್ತೆ ಕಾಡುತ್ತಿವೆ. ಬರಲಿಕ್ಕಿಲ್ಲ.. ಬಂದರೂ ಹಾಳು ಪ್ರೀತಿ ದೂರವಿರಲಿ. ಮರೆಯುವ ಕಾರಣಗಳೇ ದೂರಾಗುತ್ತಿವೆ. ಯಾಕೆ ಈ ಪರಿಯಾಗಿ ಕಾಡುತ್ತಿದ್ದಾಳೆ.. ನೋವು ಕೊಟ್ಟವಳು ಎಂದು ನಾನು ಹೇಳಲಾರೆ. ಈಗ ನೇರಾನೇರ ಕೇಳುತ್ತಿದ್ದೇನೆ - ನನ್ನ ಸಾಮ್ರಾಜ್ಯಕ್ಕೆ ಬರ್ತೀಯಾ?

IFM

ಸಿಗರೇಟು ಸುಟ್ಟಾಗ ನಿನ್ನ ನೆನಪುಗಳು ಮಾಸಬಹುದೇನೋ ಅಂದು ಕೊಂಡೆ. ನೀನು ಸುಡುವಷ್ಟು ನೋವನ್ನು ನನಗೆ ಕೊಟ್ಟವಳಲ್ಲ ಎಂದು ತಿಳಿದ ಮೇಲೆ ನಿನ್ನ ಜತೆ ಆ ಚಟವೂ ಸೇರಿಕೊಂಡಿದೆ ಹುಡುಗಿ. ನೀನು ಅದಕ್ಕೆ ಮದ್ದಾಗುತ್ತೀಯೆಂಬ ನಂಬಿಕೆ ನನ್ನಲ್ಲಿ ಉಳಿದಿಲ್ಲ. ಆದರೂ ಯಾಕೋ ನೀನು ಬೇಕೆನಿಸುತ್ತಿದ್ದಿ.

ನಿನ್ನ ಕನಸುಗಳಿಗೆ ಬಣ್ಣ ಮೆತ್ತುವಷ್ಟು ಮೆರುಗು ನನ್ನಲ್ಲಿದೆ ಅಂದುಕೊಂಡವನಲ್ಲ. ನಾನೋ ಬರಿ ಮೈಯವ ಅಂದುಕೊಂಡು ಇನ್ನೂ ಮನಸ್ಸಿನಲ್ಲೇ ಗೂಡು ಕಟ್ಟಿ ತಿರುಗುವ ಅಬ್ಬೇಪಾರಿ. ಸಂಸಾರದ ಚಿಂತೆ ಇನ್ನೂ ತುಂಬಾ ದೂರವಿದೆ ಎಂಬ ಆಲಸ್ಯ. ನಿಧಾನವಾಗಿ ಕೂತು ಯೋಚಿಸಿದಾಗ ನೆನಪಾಗುತ್ತದೆ ಇಪ್ಪತ್ತರ ಮೇಲಿನ ಮತ್ತೇಳು ಮುಗಿಯಿತೆಂದು..! ಬದುಕಿನ ಬಗ್ಗೆ ಬೆಟ್ಟದ ಕಲ್ಪನೆಗಳು ನನಗಿಲ್ಲ. ಹುಳುಕು ತೊಳೆದು ಸ್ವಚ್ಛವಾಗಿ ನಿನ್ನ ಜತೆಗಿರಬಲ್ಲೆನೆಂಬ ಭರವಸೆ ನಾಲಗೆಯ ತುದಿಯಲ್ಲಿದೆ. ಆದರೂ ಏಕೋ..

ಯಾಕೋ ನಿನ್ನಷ್ಟು ಆಪ್ತರು ಇತ್ತೀಚೆಗೆ ಯಾರು ಸಿಗುತ್ತಿಲ್ಲ. ಆದರೂ ನನ್ನ ಎಡಗಾಲು ಬೇಡ ಅನ್ನುತ್ತಿದೆ ಹುಡುಗಿ. ಏನ್ಮಾಡಲಿ.. ಬಿಸಿ ನೀರಿನ ಸ್ನಾನದ ಕೋಣೆಯಲ್ಲಿಯೂ ಸಣ್ಣಗೆ ನಡುಗುವ ನನಗೀಗ ನೀನೇ ನೆನಪಾಗುತ್ತಿ. ಬಹುಶಃ ಮತ್ತೆ ಪ್ರೀತಿಯ ಗಾಳಿ ನನ್ನ ಕಡೆ ಬೀಸುತ್ತಿದೆ ಎಂದುಕೊಂಡಿದ್ದೇನೆ... ನೀರವತೆ ಕಡಿಮೆಯಾಗುತ್ತಿದೆ. ನೋವುಗಳು ಮಾಯವಾಗುತ್ತಿವೆ. ಕಲಿಸಿದ್ದು ನೀನೇ ತಾನೆ..

ಪ್ರೀತಿಯ ಮಾತುಗಳು ಮತ್ತೆ ನನ್ನ ಬಾಯಿಯಿಂದ ಬರುತ್ತಿದೆ. ನಿನ್ನಿಷ್ಟದ ಫಲವತ್ತಾದ ಹಳೆ ಮಾತುಗಳಿಗೆ ಮತ್ತೆ ಮೊರೆ ಹೋಗುತ್ತಿದ್ದೇನೆ.. ಅವುಗಳಿಗೆ ಕಿವಿಯಾಗುತ್ತಿದ್ದೇನೆ. ಪಕ್ಕನೆ ಮುಖ ನೋಡಿದವರೆಲ್ಲ ಪ್ರೀತಿಗಿಲ್ಲಿ ಜಾಗವಿರಲಿಕ್ಕಿಲ್ಲವೆಂದುಕೊಂಡವರೇ. ಮೋಸ ಮಾಡಿದವನು ಎಂಬ ಹಣೆ ಪಟ್ಟಿ ಬೇರೆ ಥಳುಕು ಹಾಕಿಕೊಂಡಿದೆ. ಅದನ್ನೆಲ್ಲ ತಿಳಿಯುವ ಅವರಿಗೆಲ್ಲಿಯ ತಾಳ್ಮೆ ಬಿಡು. ನಿನ್ನಷ್ಟು ನನ್ನನ್ನು ಹಚ್ಚಿಕೊಂಡಿರಲಿಕ್ಕಿಲ್ಲ ಎಂದು ಆಗೆಲ್ಲ ಅಂದುಕೊಳ್ಳುತ್ತೇನೆ. ಮತ್ತೆ ನಿಜ ಮಾಡ್ತೀಯಾ ಚಿನ್ನಾ..?


ನಮ್ಮ ಉತ್ತುಂಗದ ದಿನಗಳು ದೂರವಿಲ್ಲ ಎಂಬಂತೆ ಬಯಲುದಾರಿಗಳು ಕಾಣಿಸುತ್ತಿವೆ. ತೇಲುಗಣ್ಣಿನ ಪರದೆಯಲ್ಲಿ ಹಚ್ಚ ಹಸುರ ದಿನಗಳು ತೇಲಿ ಬರುತ್ತಿವೆ. ಆ ದಿನಗಳು ಮರೆಯಲಾಗದ್ದು ಎಂಬುದು ನಮಗಿಂತ ಹೆಚ್ಚು ಬೇರೆ ಯಾರಿಗೂ ತಿಳಿದಿರಲು ಸಾಧ್ಯವಿಲ್ಲ ಬಿಡು. ಪ್ರೀತಿಯಲ್ಲಿ ಅಷ್ಟೆಲ್ಲ ಸುಖಗಳಿರುತ್ತವೆ ಎಂದು ತಿಳಿಸಿ ಹೇಳಿದವಳು ನೀನೇ ತಾನೇ? ಅದು ನಿಜಕ್ಕೂ ಪ್ರೀತಿಯಾಗಿತ್ತಾ ಅಥವಾ ವ್ಯಾಮೋಹವೇ ಎಂದು ನಂತರದ ದಿನಗಳಲ್ಲಿ ಬಿಟ್ಟೂ ಬಿಡದೆ ಕಾಡಿದ್ದಿದೆ. ಮೋಹವಿಲ್ಲದ ಪ್ರೀತಿಯಾದರೂ ಎಂತಹುದು ಎಂದು ನಾನು ಅದನ್ನು ಪ್ರೀತಿಯೆಂದೇ ನಂಬಿಕೊಂಡಿದ್ದೇನೆ.
ನಿಜಕ್ಕೂ ನಾನು ನಿನಗೆ ಇಷ್ಟವಾಗಿದ್ದೆನಾ? ಇದು ನನಗೆ ಆಗಾಗ ಕಾಡುವ ಪ್ರಶ್ನೆ. ಉತ್ತರಿಸಲು ನನ್ನ ಬಳಿ ಯಾರಿದ್ದಾರೆ? ಅದಷ್ಟೂ ವರ್ಷಗಳಿಂದ ಕೆರೆಸಿಕೊಂಡ ಗಡ್ಡವೂ ಒರಟೊರಟಾಗತೊಡಗಿದೆ. ಎಷ್ಟಾದರೂ ನೀನು ನೇವರಿಸಿದ್ದಲ್ಲವೇ ಎಂಬುದಕ್ಕೆ ಈಗಲೂ ಕೈಯಾಡಿಸುತ್ತಿರುತ್ತೇನೆ. ಆಗಲೂ ಯೋಚನೆ ಅದೇ.. ಮತ್ತೆ ಬರುತ್ತೀಯಾ...... ಓ ಪ್ರಿಯೆ ಇದು ನ್ಯಾಯನಾ Wednesday, February 2, 2011


ನಿಮ್ಮ ಹುಡುಗಿನ ನೀವು ಎಷ್ಟು ಅರ್ಥ ಮಾಡಿಕೊಂಡಿದೀರ ???..............

ಹುಡುಗೀರಿಗೂ ಹೂವಿಗೂ ಹೋಲಿಕೆ ಇದೆ ಅನ್ನೋದನ್ನ ನಮ್ಮ ಶ್ರೇಷ್ಠ ಕವಿಗಳು ಅವರ ಕವನದಲ್ಲಿ ಆಗ್ಲೇ ಬರೆದಿದ್ದಾರೆ. ಈ ಸತ್ಯಾನ ನಮಗೆ ಸಾರಿ ಹೇಳಿದಾರೆ. ಆದರೆ ಹೂವಿಗೂ ಹೆಣ್ಣಿಗೂ ಇರುವ ಹೋಲಿಕೆ ನಮಗಿನ್ನು ಸರಿಯಾಗಿ ಗೊತ್ತಿಲ್ಲ ಅನ್ನೋದು ನನ್ನ ಭಾವನೆ. ಇದರ ಬಗ್ಗೆ ನನ್ನ ಅಭಿಪ್ರಾಯ ಇಲ್ಲಿದೆ ನೋಡಿ. ಎಷ್ಟು ಜಾತಿ ಹೂವುಗಳು ಈ ಪ್ರಪಂಚದಲ್ಲಿ ಇದಾವೋ ಅಷ್ಟು ರೀತಿಯ ಹುಡುಗೀರು ಇದಾರೆ ಸ್ವಾಮಿ. ಕೆಲವರು ಮಲ್ಲಿಗೆ ಇದ್ದ ಹಾಗೆ, ಇನ್ನು ಕೆಲವರು ಗುಲಾಬಿ ಇದ್ದ ಹಾಗೆ, ಇನ್ನು ಕೆಲವರು ಸಂಪಿಗೆ, ಇನ್ನು ಕೆಲವರು ಕಾಲಿಫ್ಲೋವೆರ್ !!!. ಹೀಗೆ ಇನ್ನು ಅನೇಕಾನೇಕ ಹುಡುಗೀರು ಇದಾರೆ. ಒಂದು ಹುಡುಗಿ ಯಾವ್ ಜಾತಿ ಹೂವಿಗೆ ಸೇರುತ್ತಾಳೆ ಅನ್ನೋದು ಹೂವಿನ ಗುಣ ಮತ್ತು ಹೆಣ್ಣಿನ ಗುಣದ ಹೋಲಿಕೆಯಿಂದ ಗೊತ್ತಾಗುತ್ತೆ. ಒಂದು ಉದಾಹರಣೆ ಇಲ್ಲಿ ಕೊಡ್ತೀನಿ. ಗುಲಾಬಿ ಹೂವಿನಲ್ಲಿ ಮ್ರುದುತ್ವನು ಇದೆ, ಚುಚ್ಚೋ ಸ್ವಭಾವನು ಇದೆ. ಗುಲಾಬಿ ಹೂವಿನ ಎಲೆ ಮುಟ್ಟಿದಾಗ ಆನಂದ ಸಿಗುತ್ತೆ, ಮುಳ್ಳು ಮುಟ್ಟಿದಾಗ ನೋವಾಗುತ್ತೆ. ಗುಲಾಬಿ ಥರ ಇರೋ ಹುಡುಗೀರು ಕೆಲವು ಸಲ ಅವರ ಒಳ್ಳೆತನದಿಂದ ತುಂಬ ಖುಷಿಯಾಗಿರ್ತಾರೆ. ಕೆಲವು ಸಲ ಸಕತ್ ಕಿರ್ಕಿರಿ ಮಾಡ್ತಾರೆ. ಇನ್ನು ಕೆಲವರು ನೋಡೋದಿಕ್ಕೆ ಸೀದಾ ಸಾದಾ ಥರ ಇರ್ತಾರೆ ಆದ್ರೆ ತುಂಬ ತಲೆ ತಿಂತಾರೆ. ಹೀಗೆ ಯೋಚನೆ ಮಾಡಿದ್ರೆ ಹೋಲಿಕೆಗಳು ಸಿಗ್ತವೆ. ನಾನು ಹೇಳ್ತಾ ಇರೋದು ನೂರಕ್ಕೆ ನೂರರಷ್ಟು ಸತ್ಯ ಅಂತ ಅಲ್ಲ..ಕೆಲವು ಹೋಲಿಕೆಗಳು ಇದ್ದೆ ಇರ್ತವೆ ಅನ್ನೋದು ನನ್ನ ಅಭಿಪ್ರಾಯ. ಹೂವಿನ ಗುಣದ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿರೋದ್ರಿಂದ ನಿಮ್ಮ ಮನದರಸಿ ಗುಣ ಯಾವುದು ಅಂಥ ಅರ್ಥ ಮಾಡಿಕೊಳ್ಳೋಕೆ ಸುಲಭ ಆಗುತ್ತೆ. ಅವರ ಗುಣ ಅರ್ಥ ಆದಾಗ , ಅವರ ಜೊತೆ ಹೇಗೆ ಇರಬೇಕು ಅನ್ನೋದು ಗೊತ್ತಾಗುತ್ತೆ. ಈ ಸತ್ಯ ತಿಳಿದಾಗ ಹೂವು(ಹುಡುಗಿ) ಬಾಡದ (ಬೇಜಾರಾಗದ) ಹಾಗೆ ನೀವು ನೋಡಿಕೊಳ್ತೀರ. ಆಗ ನಿಮ್ಮ ಜೀವನ ಸಕತ್ ಚೆನ್ನಾಗಿರುತ್ತೆ....

ನೀವೇನಂತೀರಾ ಗೆಳೆಯರೇ ಮತ್ತು ಗೆಳತಿಯರೆ ?ಬಿಟ್ಟು ಹೋದವಳಿಗಾಗಿ.................

ನಾನು ಪ್ರೀತಿಸಿದ ಹುಡುಗಿ ನನ್ನ ಪ್ರೀತಿಸಲಿಲ್ಲ
ನನ್ನ ಪ್ರೀತಿಸಿದ ಹುಡುಗಿಯ ನಾ ಪ್ರೀತಿಸಲಿಲ್ಲ
ಜೀವನದುದ್ದಕ್ಕೂ ಒಂಟಿತನವೇ ಕಾಡಿತಲ್ಲ
ಸುಖ ದುಃಖಗಳೆರಡು ನನ್ನಲ್ಲೇ ಹಂಚಿ ಹೋದವಲ್ಲ

ಅವಳಿಗಾಗಿ ನಾ ಮಾಡಿದೆ ಎಲ್ಲ ತ್ಯಾಗ
ಬಯಸುವೆ ಅವಲಿಗಿರಲೆಂದು ಸದಾ ಭೋಗ
ಚಡಪಡಿಸುತ್ತಿರುವ ಮನಕೆ ಬೇಕು ಒಲವಿನ ಸಹಯೋಗ
ಕಾಯುತಿರುವುದು ಹೃದಯ ಸ್ವೀಕರಿಸಲು ಪ್ರೀತಿಯ ವಿನಿಯೋಗ ...

ಓ ಪ್ರಿಯೆ ಇದು ನ್ಯಾಯಾನ